ಬೆಂಗಳೂರು ಉತ್ತರ: ಟೀ ಕೊಡೋದು ತಡ ಆಯ್ತು ಅಂತ ಹಿಗ್ಗಾ ಮುಗ್ಗಾ ಥಳಿಸಿದ ಪುಂಡ! RT ನಗರದಲ್ಲಿ ಬೇಕರಿ ಮಾಲೀಕರ ಪರಿಸ್ಥಿತಿ ಕಷ್ಟ ಕಷ್ಟ! CCTv ನೋಡಿದ್ರೆ ಭಯ ಆಗುತ್ತೆ
ಸಪ್ಟೆಂಬರ್ 15 ರಾತ್ರಿ 11:45ರ ಸುಮಾರಿಗೆ ಟೀ ಕೊಡೋದು ತಡವಾಯಿತು ಅಂತ ಬೇಕರಿ ಮಾಲೀಕರ ಮೇಲೆ ಪುಂಡನೊಬ್ಬ ಹಿಗ್ಗ ಮುಗ್ಗ ಥಳಿಸಿದ್ದಾನೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಒಂದಲ್ಲ ಎರಡೆರಡು ಬಾರಿ ಕಪಾಳ ಮೋಕ್ಷ ಮಾಡಿದ್ದು ಪುಂಡನ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತ ಆಗಿದೆ. ಪಾರ್ಟಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಪ್ರಭು ಶಂಕರ ಅಂತ ತಿಳಿದು ಬಂದಿದೆ.