ಬಸವಕಲ್ಯಾಣ: ಹೈವೆ ರಸ್ತೆಯಲ್ಲಿ ಚಲಿಸುತಿದ್ದ ಬೈಕ್'ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಕೌಡಿಯಾಳ ಗ್ರಾಮದ ಬಳಿ ಜರುಗಿದೆ. ಹುಮನಾಬಾದ ತಾಲೂಕಿನ ಕಲ್ಲೂರ ಗ್ರಾಮದ ನಿವಾಸಿ ಸೂರ್ಯಕಾಂತ ಬಿರನೂರ (62) ಘಟನೆಯಲ್ಲಿ ಮೃತಪಟ್ಟ ಬೈಕ್ ಸವಾರನಾಗಿದ್ದಾನೆ. ಈ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ