ಹಿರೇಕೆರೂರು: ಪಟ್ಟಣದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮೆಡಿಕಲ್ ಶಾಪ್ ನಲ್ಲಿದ್ದ ಔಷಧಿಗಳು, ಬಿಲ್ ಗಳು ಸುಟ್ಟು ಭಸ್ಮ; 5ಲಕ್ಷ ರೂ.ಹಾನಿ
ಹಿರೇಕೆರೂರು ಪಟ್ಟಣದ ಮೆಡಿಕಲ್ ಶಾಪ್ ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡು ಸುಮಾರು 5ಲಕ್ಷ ರೂ.ಗಳಷ್ಟು ಹಾನಿ ಸಂಭವಿಸಿದ ಘಟನೆ ನಡೆದಿದೆ. ನೀಡನೇಗಿಲು ಗ್ರಾಮದ ವ್ಯಾಪಾರಿ ಕರೇಗೌಡ ಶಂಕರಗೌಡ ಪಾಟೀಲ ಎಂಬುವವರಿಗೆ ಸೇರಿದ ಅಂಗಡಿಯಲ್ಲಿ ಘಟನೆ ನಡೆದಿದೆ..ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.