ಮಾನ್ವಿ ಪಟ್ಟಣದ ಪಂಪಾ ಹೌಸಿಂಗ್ ಕಾಲೋನಿಯಲ್ಲಿನ ಶ್ರೀ ಈಶ್ವರ ದೇವಸ್ಥಾನದ 23ನೇ ವಾರ್ಷಿಕೋತ್ಸವ ಹಾಗೂ ಕಾರ್ತಿಕ ಮಾಸದ ಸಹಸ್ರ ದೀಪೋತ್ಸವ ಕಾರ್ಯಕ್ರಮವನ್ನು ಚೀಕಲಪರ್ವಿ ಶ್ರೀ ರುದ್ರಮುನೀಶ್ವರ ಮಠದ ಶ್ರೀ ಸದಾಶಿವ ಸ್ವಾಮಿಗಳು ದೀಪವನ್ನು ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ನಮ್ಮ ಸುತ್ತಮುತ್ತಲಿನ ಪ್ರಕೃತಿ ಪಂಚಭೂತಗಳಿAದ ಸೃಷ್ಟಿಯಾಗಿದ್ದು ನಮ್ಮ ದೇಹವು ಪಂಚ ತತ್ವಗಳಿಂದ ನಿರ್ಮಾಣವಾಗಿದೆ ನಾವು ಪ್ರಕೃತಿಯನ್ನು ಹಾಗೂ ದುಶ್ಚಟಗಳಿಂದ ದೇಹವು ಕೂಡ ಮಲಿನವಾಗುತ್ತದೆ ಅದ್ದರೆ ಪಂಚಭೂತಗಳಲ್ಲಿ ಒಂದಾಗಿರುವ ಅಗ್ನಿಯನ್ನು ಯಾರು ಕೂಡ ಮಲಿನ ಮಾಡುವುದಕ್ಕೆ ಬರುವುದಿಲ್ಲ ಅಗ್ನಿ ಅತ್ಯಂತ ಪವಿತ್ರವಾಗಿರುತ್ತದೆ ಕಾರ್ತಿಕ ಮಾಸದಲ್ಲಿ ದೇವಸ್ಥಾನದ ಆವರಣದಲ್ಲಿ ಪವಿತ್ರವಾದ ದೀಪಗಳನ್ನು ಬೆಳಗಿಸಬೇಕು ಎಂದರು.