ಜಿಲ್ಲಾಧಿಕಾರಿ ಆಸಕ್ತಿ ನಗರಸಭೆಯಿಂದ ವಿಶೇಷಚೇತನ ವ್ಯಕ್ತಿಗೆ ವಾಹನ ಕೊಡುಗೆ ಕೋಲಾರ : ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರು ಕೋಲಾರ ನಗರದಲ್ಲಿ ಬೃಹತ್ ಸ್ವಚ್ಛತಾ ಆಂದೋಲನ ಕಾರ್ಯಕ್ರಮದ ನಿಮಿತ್ತ ನಗರದಲ್ಲಿ ಸಂಚಾರ ಮಾಡುತ್ತಿದ್ದ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿ ಭಿಕ್ಷೆ ಬೇಡುತ್ತಿದ್ದ ಸುಮಾರು ೬೦ ವರ್ಷದ ಖಾಸಿಂ ಖಾನ್ ಎಂಬ ವ್ಯಕ್ತಿ ಸುಮಾರು ವರ್ಷಗಳಿಂದ ಅಂಗವಿಕಲತೆಯಿಂದ ನರಳುತ್ತಿದ್ದಾರೆ. ಇವರಿಗೆ ಜೀವನ ಮಾಡಲು ಸರ್ಕಾರದಿಂದ ಸೂಕ್ತ ಸೌಲಭ್ಯವನ್ನು ಒದಗಿಸಬೇಕು ಎಂದು ಸ್ಥಳೀಯ ಆಟೋ ಚಾಲಕರು ಮನವಿ ಮಾಡಿದ್ದರು. ಜಿಲ್ಲಾಧಿಕಾರಿ ಅವರು ವಿಶೇಷ ಆಸಕ್ತಿ ವಹಿಸಿ ನಗರಸಭೆಯ ಆಯುಕ್ತರಾದ ನವೀನ್ ಚಂದ್ರ ಅವರಿಗೆ ತಿಳಿಸಿ ನಗರಸಭೆ