ಕೃಷ್ಣರಾಜಪೇಟೆ: ಕಿಕ್ಕೇರಿ ರಾಜ್ಯ ಹೆದ್ದಾರಿಯ ಬಿ.ಎಂ.ರಸ್ತೆಯ ಸ್ಮಶಾನದ ಬಳಿ ಅಪರಿಚಿತ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
ಕೆ ಆರ್ ಪೇಟೆ ತಾಲ್ಲೂಕಿನ ಕಿಕ್ಕೇರಿ ರಾಜ್ಯ ಹೆದ್ದಾರಿಯ ಬಿ.ಎಂ.ರಸ್ತೆಯ ಸ್ಮಶಾನದ ಬಳಿ ಅಪರಿಚಿತ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸುಮಾರು 5.7ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ಕುರುಚಲುಗಡ್ಡ, ದುಂಡು ಮುಖ, ಸಾಧಾರಣ ತೆಳ್ಳಗಿನ ಶರೀರಉಳ್ಳವನಾಗಿದ್ದಾನೆ. ಮೈಮೇಲೆ ಯಾವುದೇ ಅಂಗಿಯನ್ನು ಧರಿಸದೆ, ಸಿಮೆಂಟು ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದಾನೆ. ಮೃತ ಶವವನ್ನು ಆದಿಚುಂಚನಗಿರಿಯ ಬಿಜಿಎಸ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಕಳೆದೆರಡು ದಿನಗಳಿಂದ ಈ ವ್ಯಕ್ತಿ ಸುತ್ತಮುತ್ತಲ ಪ್ರದೇಶದಲ್ಲಿ ತಿರುಗಾಡುತ್ತಿದ್ದನು. ಹಿಂದಿ ಮಾತನಾಡುತ್ತಿದ್ದನು ಎನ್ನಲಾಗಿದೆ. ಶವದ ಮಾಹಿತಿಗಾಗಿ ಕಿಕ್ಕೇರಿ ಪೊಲೀಸ್ಠಾಣೆಗೆ 9480804861 ಸಂ