ಲಿಂಗಸೂರು: ಪಟ್ಟಣದಲ್ಲಿನ ಆಸ್ಪತ್ರೆಗೆ ಚಿಕಿತ್ಸೆ ಗೆಂದು ಬಂದಿದ್ದ ರೋಗಿ ಒಬ್ಬ ಆತ್ಮಹತ್ಯೆಗೆ ಯತ್ನ, ವ್ಯಕ್ತಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾದ ಸಿಬ್ಬಂದಿ
ರಾಯಚೂರು ಜಿಲ್ಲೆಯ ಲಿಂಗಸೂಗೂರ ಪಟ್ಟಣದ ಎಸ್ ಬಿ ಎಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಗೆಂದು ಬಂದಿದ್ದ ವ್ಯಕ್ತಿ ಒಬ್ಬ ಆಸ್ಪತ್ರೆಯ ಮೇಲಿನಿಂದ ಜಿಗಿದು ಆತ್ಮಹತ್ಯೆಗೆ ಮುಂದಾಗಿದ್ದಂತ ಘಟನೆ ಒಂದು ಮಂಗಳವಾರ ಬೆಳಿಗ್ಗೆ ನಡೆದಿದೆ ಎನ್ನಲಾದ ವೀಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ವೈರಲ್ ಆಗಿದೆ. ವ್ಯಕ್ತಿ ಯಾರು ಎನ್ನುವುದು ತಿಳಿದುಬಂದಿಲ್ಲ.ಕಟ್ಟಡದ ಮೇಲೆ ಹತ್ತಿ ಕೆಳಗೆ ಜಿಗಿಯಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿಯೇ ಗಮನಿಸಿದ ಆಸ್ಪತ್ರೆಯ ಸಿಬ್ಬಂದಿಗಳು ಹಿಂಬದಿಯಿಂದ ಹೋಗಿ ತಕ್ಷಣಕ್ಕೆ ಆತನನ್ನು ಹಿಡಿದು ಎಳೆದುಕೊಳ್ಳುವ ಮೂಲಕ ಪ್ರಾಣ ರಕ್ಷಿಸಿ ಸಿಬ್ಬಂದಿಗಳು ಭಾರಿ ಅಪಾಯ ಒಂದು ತಪ್ಪಿಸಿದ್ದಾರೆ. ಈತನ ಆತ್ಮಹತ್ಯೆಯ ಯತ್ನಕ್ಕೆ ಕಾರಣ ಏನು ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ.