ನೆಲಮಂಗಲ: ತಾಲೂಕಿನ ದೇವರಕೆರೆಯಲ್ಲಿ ಈಜಾಡಲು ಹೋದ ಯುವಕ ಸಾವು, ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಕೆರೆಯಲ್ಲಿ ಈಜಾ(ಖ)Ä ಹೋಗಿ ಯುವಕ ಸಾವು : ದೇವರಕೆರೆಯಲ್ಲಿ ಘಟನೆ ದಾಬಸ್‌ಪೇಟೆ : ಈಜಾಡ(ಖ)Ä ತೆರಳಿದ್ದ ಯುವಕನೊಬ್ಬ ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಸೋಂಪುರ ಹೋಬಳಿ ದೇವರಕೆರೆಯಲ್ಲಿ ನಡೆದಿದೆ. ಸೋಂಪುರ ಹೋಬಳಿಯ ಹೊನ್ನೇನಹಳ್ಳಿ ತಾಂಡ್ಯದ ನಿವಾಸಿ ತಿಮ್ಮನಾಯ್ಕ್ (೨೬) ಮೃತಪಟ್ಟ ಯುವಕ. ಮೃತ ತಿಮ್ಮನಾಯ್ಕ್ ಹಾಗೂ ಆತನ ನಾಲ್ಕು ಜನ ಸ್ನೇಹಿತರು ದೇವರಕೆರೆಯಲ್ಲಿ ಈಜಾಡ(ಖ)Ä ತೆರಳಿದ್ದಾರೆ. ಮೊದಲಿಗೆ ಮೃತ ತಿಮ್ಮನಾಯ್ಕ್ ಕೆರೆಗೆ ಈಜಾಡಲು ಇಳಿದು ಈಜಾಡುತ್ತಿದ್ದಾಗ ಉಸಿರುಕಟ್ಟಿ ನೀರಿನಲ್ಲಿ ಮುಳುಗಿದ್ದಾನೆ. ಘಟನಾ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಕಾರ್ಯಚರಣೆಗೆ ಸಹಕರಿಸಿದ್ದಾರೆ.