ದೇವದುರ್ಗ: ಕೊತ್ತದೊಡ್ಡಿ ಗ್ರಾಮದ ಏಕಲವ್ಯ ಮಾದರಿ ವಸತಿ ಶಾಲೆಗೆ ಸಂಸದ ಜಿ.ಕುಮಾರ ನಾಯಕ ದಿಢೀರ್ ಭೇಟಿ
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಕೊತ್ತದೊಡ್ಡಿ ಗ್ರಾಮದಲ್ಲಿರುವ ಏಕಲವ್ಯ ಮಾದರಿ ವಸತಿ ಶಾಲೆಗೆ ಸೋಮವಾರ ಮಧ್ಯಾನ ರಾಯಚೂರ ಸಂಸದ ಜಿ ಕುಮಾರ ನಾಯಕ ಅವರು ದಿಢೀರನೆ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲಿರುವಂಥ ಅಡುಗೆ ಕೋಣೆ ಸ್ನಾನ ಗೃಹ ಸೇರಿದಂತೆ ಹಲವು ಕಡೆಗಳಲ್ಲಿ ಭೇಟಿ ನೀಡಿ ವೀಕ್ಷಿಸಿದರು. ವಸತಿ ಶಾಲೆಯಲ್ಲಿನ ಬಾಲಕರನ್ನು ಮತ್ತು ಬಾಲಕಿಯರನ್ನು ಪ್ರತ್ಯೇಕವಾಗಿ ಭೇಟಿ ನೀಡಿ ಅವರ ಸಮಸ್ಯೆಗಳನ್ನು ಆಲಿಸಿದ್ದಾರೆ. ಸ್ವತಃ ಭೋಜನ ಸವಿಯುವ ಮೂಲಕ ಆಹಾರದ ಗುಣಮಟ್ಟದ ಪರಿಶೀಲನೆಯನ್ನು ನಡೆಸಿದರು. ಉತ್ತಮವಾಗಿ ಅಭ್ಯಾಸ ಮಾಡಿ ಹೆಚ್ಚಿನ ಅಂಕ ಪಡೆದು ಉತ್ತೀರ್ಣರಾಗಲು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.