ಸಿಂಧನೂರು: ಸಿಂಧನೂರು : ಶಿಸ್ತಿನ ಸಿಪಾಯಿಗಳಂತೆ ಪಥಸಂಚಲನ ಮುಗಿಸಿದ RSS ಕಾರ್ಯಕರ್ತರು
ನಗರದ ರಾಷ್ಟ್ರೀಯ ಸ್ವಯಂಸೇವಕ ಸಂಘ ಸಿಂಧನೂರು ವತಿಯಿಂದ ಆರ್ ಜಿ ಎಂ ಶಾಲೆಯ ಮೈದಾನದಿಂದ ಪ್ರಾರಂಭಗೊಂಡ ಆರ್ ಎಸ್ ಎಸ್ ಪಥ ಸಂಚಲನ ನಗರದ ವಿವಿಧ ರಸ್ತೆಗಳ ಮೂಲಕ ಗಾಂಧಿವೃತ್ತ, ಬಡಿಬೆಸ್, ಕನಕದಾ ಸರ್ಕಲ್ ಸೇರಿದಂತೆ ನಗರದ ಪ್ರಮುಖ ವೃತಗಳಿಂದ ಪತಸಂಚಲನ ಸಾಗಿ ಆರ್ ಜಿಎಂ ಶಾಲಾ ಅವರಣದಲ್ಲಿ ಅಂತ್ಯಗೊಳಿಸಿ ಸಮಾರಂಭ ಕಾರ್ಯಕ್ರಮ ಮಾಡಲಾಯಿತು. ಸರ್ಕಾರದ ಆದೇಶದ ಮದ್ಯೆಯು ನಗರದಲ್ಲಿ ಅತ್ಯಂತ ಶಿಸ್ತಿನಿಂದ ಶಾಂತಿವಸ್ಥೆಯಿಂದ ಈ ಒಂದು ಪತಸಂಚಲನ ಆಕರ್ಷಕವಾಗಿ ಜರುಗಿತು. ದಾರಿಯೋದಕ್ಕೂ ಪುಷ್ಪಾರ್ಚನೆ ಮೂಲಕ ಶಿಸ್ತಿನ ಸಿಪಾಯಿಗಳಂತೆ ಇದ್ದ ಆರ್ ಎಸ್ ಎಸ್ ಕಾರ್ಯಕರ್ತರಿಗೆ ಸ್ವಾಗತಿಸಲಾಯಿತು.