ಸರ್ಕಾರದ ದುಡ್ಡು ಬಿಜೆಪಿ ಕಾರ್ಯಕರ್ತರ ಪಾಲು ? ಬಸವಕಲ್ಯಾಣ: ರಸ್ತೆ, ಚರಂಡಿ ಸೇರಿದಂತೆ ಕ್ಷೇತ್ರದ ವಿವಿಧ ಅಭಿವೃದ್ದಿ ಕಾಮಗಾರಿಗಳಿಗಾಗಿ ಸರ್ಕಾರದಿಂದ ಬಿಡುಗಡೆಗೊಂಡ 49 ಕೋಟಿ ರೂ. ಅನುದಾನ ಬಿಜೆಪಿ ಕಾರ್ಯಕರ್ತರ ಪಾಲಾಗುತ್ತಿದೆ ಎಂದು ಕೆಡಿಪಿ ನಾಮನಿರ್ದೇಶಿತ ಸದಸ್ಯರು ಆರೋಪಿಸಿದರು. ಶುಕ್ರವಾರ ಇಲ್ಲಿಯ ತಾಪಂ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಈ ಬಗ್ಗೆ ಸ್ಥಳೀಯ ಶಾಸಕ ಶರಣು ಸಲಗರ್ ಅವರೇ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ ಎಂದು ಸದಸ್ಯ ಶಿವಕುಮಾರ ಶಟಗಾರ ಆರೋಪಿಸಿದರು. ಅಭಿವೃದ್ದಿ ಕಾಮಗಾರಿಗಳಿಗಾಗಿ ಸರ್ಕಾರದಿಂದ ಬಿಡುಗಡೆಗೊಂಡ 49 ಕೋಟಿ ರೂ. ಅನುದಾನದ ಕಾಮಗಾರಿಗಳು ಟೆಂಡರ್ ಕರೆಯದೆ ನಿರ್ಮಿತಿ ಕೇಂದ್ರಕ್ಕೆ ವಹಿಸಿದ್ದು ಯಾಕೆ ? ಎಂದು ಪ್ರಶ್ನಿಸ