ಜೋಯಿಡಾ : ಪ್ರತಿವರ್ಷದಂತೆ ಈ ವರ್ಷವೂ ಜೋಯಿಡಾ ತಾಲೂಕು ಕೇಂದ್ರದಲ್ಲಿರುವ ಶಿವಾಜಿ ವೃತದ ಹತ್ತಿರ ಭಕ್ತಾಭಿಮಾನಿಗಳ ಸರ್ವ ಸಹಕಾರದಲ್ಲಿ 31 ನೇ ವರ್ಷದ ಶ್ರೀ.ಅಯ್ಯಪ್ಪ ಸ್ವಾಮಿಯ ಪೂಜೋತ್ಸವ ಕಾರ್ಯಕ್ರಮವು ಶ್ರದ್ಧಾಭಕ್ತಿಯಿಂದ ಬುಧವಾರ ಜರುಗಿತು. ಗುರುಸ್ವಾಮಿ ಸಿದ್ದು ಜೋಕೇರಿಯವರ ನೇತೃತ್ವದಲ್ಲಿ ಪಡಿಪೂಜೆ, ಮಹಾಪೂಜೆ ಜರುಗಿತು. ಮಹಾಪೂಜೆಯಾದ ಬಳಿಕ ಬುಧವಾರ ಮಧ್ಯಾಹ್ನ 12 ಗಂಟೆಯಿಂದ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ಅನ್ನಸಂತರ್ಪಣೆಯು ಬುಧವಾರ ಮಧ್ಯಾಹ್ನ 3 ಗಂಟೆಯ ನಂತರವೂ ಮುಂದುವರೆದಿತ್ತು.