ಶಿರಹಟ್ಟಿ: ಮಠ ಮಾನ್ಯಗಳ ಸ್ವಾಮಿಜಿಗಳು ಧರ್ಮ ಪ್ರಚಾರ ಮಾಡಬೇಕು ಹೊರತು ರಾಜಕೀಯ ಮಾಡಬಾರದು: ಪಟ್ಟಣದಲ್ಲಿ ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ
ಹೌದು,ಮಠ ಮಾನ್ಯಗಳ ಸ್ವಾಮಿಜಿಗಳು ಧರ್ಮ ಪ್ರಚಾರ ಮಾಡಬೇಕೇ ಹೊರತು ರಾಜಕೀಯ ಮಾಡಬಾರದು ಎಂದು ಶಿರಹಟ್ಟಿ ಪಟ್ಟಣದಲ್ಲಿ ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ ಅವರು ಶುಕ್ರವಾರ ಪಟ್ಟಣದ ನೌಕರರ ಭವನದಲ್ಲಿ ಮದ್ಯಾನ್ಹ ೦೧ ಗಂಟೆಗೆ ಶಿರಹಟ್ಟಿಯ ಫಕ್ಕೀರೇಶ್ವರ ಮಠದ ಭಕ್ತಾದಿಗಳು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ, ಇದೇ 18 ರಂದು ಫಕ್ಕೀರ ದಿಂಗಾಲೇಶ್ವರ ಶ್ರೀಗಳು ಧಾರವಾಡ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ. ಚುನಾವಣೆ ಕಣದಿಂದ ಶ್ರೀಗಳು ಹಿಂದೆ ಸರಿಯಬೇಕು ಎಂದು ಮನವಿ ಮಾಡಿಕೊಂಡರು. ಶ್ರೀಗಳು ನಾಮಪತ್ರ ಸಲ್ಲಿಸಿದ್ದೇ ಆದರೆ ಅಂದೇ ಜ ಫಕ್ಕೀರೇಶ್ವರ ಮಠದ ಪೀಠಾಧಿಪತಿ ಸಿದ್ದರಾಮಸ್ವಾಮಿಗಳ ಜೊತೆ ಶ್ರೀ ಮಠದ ಭಕ್ತರ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.