ಮಂಗಳಮುಖಿಯರನ್ನ ಮುಖ್ಯ ಭೂಮಿಯಲ್ಲಿಟ್ಟು ನಿರ್ಮಾಣ ಮಾಡೊರುವ ಶಿವಲೀಲಾ ಚಿತ್ರಕ್ಕೆ ರಾಜ್ಯದಲ್ಲಿ ಚಿತ್ರಮಂದಿರಗಳು ಸಿಗುತ್ತಿಲ್ಲ ಎಂದು ಭಾನುವಾರ ಸಂಜೆ 4 ಗಂಟೆ ಸುಮಾರಿಗೆ ಜೋಗತಿ ಮಂಜಮ್ಮ ಅವರ ನೇತೃತ್ವದಲ್ಲಿ ನಗರದ ಪ್ರೀಡಂ ಪಾರ್ಕ್ ನಲ್ಲಿ ಮಂಗಳಮುಖಿಯರು ಪ್ರತಿಭಟನೆ ನಡೆಸಿದರು. ನಮ್ಮ ಚಿತ್ರವನ್ನ ಜನ ನೋಡಲು ಇಚ್ಚಿಸುತ್ತಿದ್ದು ಆದರೆ ಪ್ರದರ್ಶನಕ್ಕೆ ಚಿತ್ರಮಂದಿರಗಳು ಸಿಗುತ್ತಿಲ್ಲ ಸರ್ಕಾರ ಶಿವಲೀಲಾ ಚಿತ್ರಕ್ಕೆ ಚಿತ್ರಗಳನ್ನ ಕೊಡಬೇಕು ಎಂದು ಪ್ರತಿಭಟನೆ ನಡೆಸಿದರು.