ಚಿಕ್ಕಬಳ್ಳಾಪುರ: ಎನ್ಡಿಎ ಪಕ್ಷಗಳ ಮುಖಂಡರಿಂದ ಸ್ವಪಕ್ಷದ ಬೆಂಬಲಿತನ ಸೋಲು- ಲಿಂಗಾರೆಡ್ಡಿ ಆರೋಪ
ಸಂಸದ ಸುಧಾಕರ್ ಬಂಟನಿಗೆ ಟಿಎಪಿಎಂಸಿ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮುಖಂಡರೇ ಸೋಲಿಸಿದ್ದು ಪರಸ್ಪರ ಸಂಸದ ಸುಧಾಕರ್ ಬೆಂಬಲಿಗರ ನಡುವೆ ವೈಮನಸ್ಸು ಶುರುವಾಗಿದೆ. ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಚುನಾವಣೆ ನಡೆದಿದ್ದು ಸಂಸದ ಸುಧಾಕರ್ ಬೆಂಬಲಿಗರು 9 ಜನ ಚುನಾವಣೆಯಲ್ಲಿ ಸ್ಪರ್ದೇ ಮಾಡಿದ್ರು ಆದ್ರೆ 8 ಜನ ಮಾತ್ರ ಚುನಾವಣೆಯಲ್ಲಿ ಗೆದ್ದು ಬೀಗಿದ್ದು ಉಳಿದ ಓರ್ವ ಅಭ್ಯರ್ಥಿಯನ್ನು ಬಿಜೆಪಿ ಜೆಡಿಎಸ್ ಮುಖಂಡರೇ ಪೂರ್ವ ನಿಯೋಜಿತವಾಗಿ ಸೋಲಿಗೆ ಕಾರಣ ಎಂದು ನೇರ ಆರೋಪ ಮಾಡಿದ್ದಾರೆ.