ಆಳಂದ ಪಟ್ಟಣದ ಜೆಎಂಎಫ್‌ಸಿ ಕೋರ್ಟ್ ಆವರಣದಲ್ಲಿ ಶುಕ್ರವಾರ ಬೆಳಿಗ್ಗೆ 11 ಘಂಟೆಗೆ ವಿಶ್ವ ಗ್ರಾಹಕರ ದಿನವನ್ನು ಆಚರಣೆ ಮಾಡಲಾಯಿತು. ಹಿರಿಯ ಶ್ರೇಣಿ ನ್ಯಾಯಧೀಶ ಎಸ್.ಎಂ.ಅರುಟಗಿ ಕಾರ್ಯಕ್ರಮ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶ ಯಲ್ಲಪ್ಪ ಕಲ್ಲಾಪೂರ,ನ್ಯಾಯವಾದಿ ಸಂಘದ ಅಧ್ಯಕ್ಷ ಕಮಲಾಕರ ರಾಠೋಡ,ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ತೈಯಬ ಅಲಿ ಜರ್ದಿ, ,ಇಸ್ಮಾಯಿಲ್ ಪಟೇಲ, ಜ್ಯೋತಿ ಬಂದಿ, ಬಲಭೀಮ ಸಿಂಧೆ, ದೇವಾನಂದ ಹೊದಲೂಕರ ಮತ್ತಿತರರು ಇದ್ದರು.