ಚಿತ್ತಾಪುರ: ಪ್ರವಾಹದಿಂದ 270 ವಿದ್ಯುತ್ ಟ್ರಾನ್ಸ್ಫಾರ್ಮ್, 700 ಅಧಿಕ ಕಂಬ ಹಾನಿ: ಫಿಲ್ಡ್ ವಿಸಿಟ್ ಬಳಿಕ ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಹರವಾಳ್
ಕಲಬುರಗಿ : ಕೆಲ ದಿನಗಳಿಂದ ಕಲಬುರಗಿ ಜಿಲ್ಲೆಯಾದ್ಯಂತ ಪ್ರವಾಹ ಹಾಗೂ ಮಳೆಯಿಂದ 270 ಕ್ಕೂ ಅಧಿಕ ವಿದ್ಯುತ್ ಟ್ರಾನ್ಸ್ಫಾರ್ಮರ್ಗಳು, 700 ಕ್ಕೂ ಅಧಿಕ ಕಂಬಗಳು ಹಾನಿಗಿಡಾಗಿವೆ ಅಂತಾ ಜೆಸ್ಕಾಂ ನೂತನ ಅಧ್ಯಕ್ಷ ಪ್ರವೀಣ್ ಹರವಾಳ್ ಹೇಳಿದ್ದಾರೆ. ಅ2 ರಂದು ಮಧ್ಯಾನ 2 ಗಂಟೆಗೆ ಕಲಬುರಗಿ ಜಿಲ್ಲೆ ಚಿತ್ತಾಪುರ ಹಾಗೂ ಜೇವರ್ಗಿ ತಾಲೂಕಿನ ವಿವಿಧೆಡೆ ಪ್ರವಾಹ ಮತ್ತು ಮಳೆಯಿಂದ ಹಾನಿಗಿಡಾದ ಟ್ರಾನ್ಸ್ಫಾರ್ಮರ್ಗಳು ಮತ್ತು ವಿದ್ಯುತ್ ಕಂಬಗಳನ್ನ ಪರಿಶೀಲನೆ ನಡೆಸಿ ಮಾತನಾಡಿದರು.. ಪ್ರವಾಹದ ನೀರಿನಲ್ಲಿ ಟ್ರಾನ್ಸ್ಫಾರ್ಮರ್ಗಳು ಮತ್ತು ವಿದ್ಯುತ್ ಕಂಬಗಳು ಹಾನಿಗಿಡಾಗಿದ್ದು, ಸಾಕಷ್ಟು ಕಡೆ ವಿದ್ಯುತ್ ವ್ಯತ್ಯಯ ಉಂಟಾಗಿದೆ.. ಶೀಘ್ರದಲ್ಲೇ ಎಲ್ಲವನ್ನ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು ಅಂತಾ ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಹರವ