ಅತೀ ನಿರೀಕ್ಷೆಯ ತೆಲುಗಿನ ‘ನಟ ನಂದಮೂರಿ ಬಾಲಕೃಷ್ಣ ಅಭಿನಯದ ‘ಅಖಂಡ ಸಿನಿಮಾ ಗುರುರಾತ್ರಿಯೇ ಬಳ್ಳಾರಿ ನಗರದಲ್ಲಿ ಬಿಡುಗಡೆಯಾಗಿದೆ. ಬಳ್ಳಾರಿ ನಗರದ 3ಚಿತ್ರಮಂದಿರಗಳಲ್ಲಿ ಗುರುವಾರ ರಾತ್ರಿ 9 ಗಂಟೆಯಿಂದಲೇ ಸಿನಿಮಾ ಪ್ರದರ್ಶನ ಆರಂಭಗೊಂಡಿತು. ಗಡಿ ಜಿಲ್ಲೆಯಾದ ಕಾರಣ ಬಳ್ಳಾರಿಯಲ್ಲಿ ತೆಲುಗು ಸಿನಿಮಾಗಳಿಗೂ ಭಾರಿ ಪ್ರಮಾಣದಲ್ಲಿ ಅಭಿಮಾನಿಗಳಿದ್ದು, ಚಿತ್ರ ಮಂದಿರಗಳು ತುಂಬಿ ತುಳುಕುತ್ತಿವೆ. ಸಿನಿಮಾ ನೋಡಿ ಹೊರಬರುತ್ತಿರುವ ಅಭಿಮಾನಿಗಳು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಚಿತ್ರದ ನಾಯಕ ನಟ ನಂದಮೂರಿ ಬಾಲಕೃಷ್ಣ ಅವರ ಜನಪ್ರಿಯಸಂಭಾಷಣೆಗಳನ್ನು ಜೋರಾಗಿ ಕೂಗಿ ಹೇಳುತ್ತಾ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಚಿತ್ರಮಂದಿರದಲ್ಲಿ ಅಭಿಮಾನಿಗಳು