ರಾಯಚೂರು ತಾಲ್ಲೂಕಿನ ಯರಮರಸ್ ಬಳಿ ಇರುವ ಯರಮರಸ್ ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ಮೂರು ಘಟಕಗಳ ಪೈಕಿ ಒಂದು ಘಟಕ ಸ್ಥಗಿತವಾಗಿದ್ದು ವಿದ್ಯುತ್ ಉತ್ಪಾದನೆ ಕುಂಟಿತಗೊಂಡಿವೆ. 3 ಘಟಕಗಳಲ್ಲಿ ಪ್ರಸ್ತುತ 2 ಘಟಕಗಳು ಕಾರ್ಯ ನಿರ್ವಹಿಸುತ್ತಿದ್ದು, 1700 ಮೆಘಾವ್ಯಾಟ್ ನಲ್ಲಿ 725 ಮೆಗಾವ್ಯಾಟ್ ಉತ್ಪಾದನೆಯಾಗುತ್ತಿದ್ದು, ಅಧಿಕಾರಿಗಳು ಆದಷ್ಟು ತ್ವರಿತ ಗತಿಯಲ್ಲಿ ಸ್ಥಗಿತವಾದ ಘಟಕ ಸರಿಪರಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.