ಮಂಡ್ಯ: ಸುಬಾಷ್ ನಗರದಲ್ಲಿ ಮಗಳನ್ನು ನೋಡಲು ಬೆಂಗಳೂರಿಗೆ ತೆರಳಿದ್ದವರ ಮನೆ ಕಳ್ಳತನ, ₹ 7.40 ಲಕ್ಷ ಚಿನ್ನಾಭರಣ ದೋಚಿರುವ ಕಳ್ಳರು
Mandya, Mandya | Sep 15, 2025 ಮಗಳನ್ನು ನೋಡಲು ಬೆಂಗಳೂರಿಗೆ ತೆರಳಿದ್ದವರ ಮನೆ ಕಳ್ಳತನವಾಗಿ ₹ 7.40 ಲಕ್ಷ ಚಿನ್ನಾಭರಣ ದೋಚಿರುವ ಘಟನೆ ಮಂಡ್ಯದ ಸುಬಾಷ್ ನಗರದಲ್ಲಿ ಜರುಗಿದೆ. ಪತ್ರ ಬರಹಗಾರ ಜಿ.ಕೆ.ನರಸಿಂಹಮೂರ್ತಿ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಬೆಂಗಳೂರಿಗೆ ತೆರಳಿದ್ದ ವೇಳೆ ಮನೆಯ ಮುಂಬಾಗಿಲು ಹೊಡೆದು ಒಳ ನುಗ್ಗಿರುವ ಕಳ್ಳರು ಬೀರುವಿನಲ್ಲಿದ್ದ 7.20 ಲಕ್ಷ ರೂ ಬೆಲೆ ಬಾಳುವ 180 ಗ್ರಾಂ ಚಿನ್ನ, 20 ಸಾವಿರ ಬೆಲೆ ಬಾಳುವ 400 ಗ್ರಾಂ ಬೆಳ್ಳಿ ತಟ್ಟೆ ಕಳ್ಳತನ ಮಾಡಿದ್ದಾರೆ ಎಂದು ನಗರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಸೋಮವಾರ ಎಸ್ಪಿ ಕಚೇರಿ ಮಾಹಿತಿ ನೀಡಿದೆ. ದೂರು ದಾಖಲಿಸಿಕೊಂಡಿರುವ ನಗರ ಪಶ್ಚಿಮ ಠಾಣೆ ಪೊಲೀಸರು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.