ಹನೂರು: ಹನೂರಲ್ಲಿ ಮಗನ ಹುಟ್ಟುಹಬ್ಬದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ:ಪರಿಸರ ಸಂರಕ್ಷಣೆಗೆ ಅರ್ಥಪೂರ್ಣ ಪಾಠ
ಹುಟ್ಟುಹಬ್ಬದ ದಿನದುಂದು ವೆಚ್ಚ ಮಾಡಿ ಕಾಲ ಕಳೆಯುವ ಇಂದಿನ ದಿನಮಾನದಲ್ಲಿ 'ಪ್ಲಾಸ್ಟಿಕ್ ಮುಕ್ತ ಅರಣ್ಯ' ಮಾಡಲು ಕಾಡಿನ ರಸ್ತೆಯಲ್ಲಿ 2ಕಿಮೀ. ಪ್ಲಾಸ್ಟಿಕ್ ತ್ಯಾಜ್ಯ ಆಯುವ ಮೂಲಕ ತಮ್ಮ ಮಗನ ಹುಟ್ಟುಹಬ್ಬವನ್ನು ವಿನೂತನವಾಗಿ ಆಚರಿ ಸಿದ ಪ್ರಸಂಗ ಹನೂರಿನಲ್ಲಿ ನಡೆದಿದೆ.ಹನೂರು ತಾಲೂಕಿನ ಬಫರ್ ವಲಯದ ಅರಣ್ಯ ವೀಕ್ಷಕ ಮಹೇಶ್ ಪುತ್ರ ಶ್ರೀನಿವಾಸ ಪ್ರಸಾದ್‌ನ ಹುಟ್ಟುಹಬ್ಬದ ಪ್ರಯುಕ್ತ ನರ್ಸರಿಯಲ್ಲಿ ಗಿಡ ನೆಟ್ಟು ಸುಮಾರಎರಡು ಕಿ.ಮೀ ದೂರ ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಿಸಿ ಅರ್ಥಪೂರ್ಣವಾಗಿ ಮಗನ ಹುಟ್ಟು ಹಬ್ಬ ಆಚರಿಸಿದರು.ಮಹೇಶ್ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ಸಮಾಜಕ್ಕೆ ಏನಾದರೂ ಕೊಡುಗೆ ಕೊಡಬೇಕೆಂದು ಪ್ರತಿ ವರ್ಷ ಕೂಡ ನನ್ನ ಮಗನ ಹುಟ್ಟುಹಬ್ಬವನ್ನು ವಿನೂತನ ರೀತಿಯಲ್ಲಿ ಆಚರಣೆ ಮಾಡುತ್ತಿದ್ದೇನೆ ಎಂದರು