ಚಾಮರಾಜನಗರ: ಕಲ್ಪುರದಲ್ಲಿ ಹುಲಿ ಸೆರೆಗಾಗಿ ಮುಂದುವರಿದ ಕಾರ್ಯಚರಣೆ
ಚಾಮರಾಜನಗರ ತಾಲೂಕಿನ ಕಲ್ಪುರ ಗ್ರಾಮದಲ್ಲಿ ಹುಲಿ ಸೆರೆಗಾಗಿ ಅರಣ್ಯ ಇಲಾಖೆಯಿಂದ ಕಾರ್ಯಚರಣೆ ಮುಂದುವರಿದಿದೆ. ಕಳೆದ ಕೆಲ ದಿನಗಳಿಂದ ಕಲ್ಪುರ ಗ್ರಾಮದಲ್ಲಿ ಎರಡು ಹಸುಗಳನ್ನು ಬಲಿ ಪಡೆದು ಗ್ರಾಮಸ್ಥರಲ್ಲಿ ಹಾಗೂ ರೈತರಲ್ಲಿ ಭಯುಂಟುಮಾಡಿದೆ. ಈ ವೇಳೆ ಗ್ರಾಮಸ್ಥರು ಹಾಗೂ ರೈತರು ತಮ್ಮ ಜಮೀನುಗಳಿಗೆ ಹೋಗುವುದಕ್ಕೆ ಆಗದೇ ಭಯಭೀತರಾಗಿ ಅರಣ್ಯ ಇಲಾಖೆ ಶೀಘ್ರವಾಗಿ ಹುಲಿ ಸೆರೆ ಹಿಡಿಯುವಂತೆ ಒತ್ತಾಯಿಸಿದರು. ಇಂದು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಲ್ಪುರ ಗ್ರಾಮದ ಜಮೀನಿನುಗಳಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಲಿ ಹೆಜ್ಜೆ ಗುರುತು ಹಿಡಿದು ಕಾರ್ಯಚರಣೆ ನಡೆಸಿದರು.