ಹುಮ್ನಾಬಾದ್: ನಗರದ ಎರಡು ಪ್ರತ್ಯೇಕ ಕಡೆ ದಾಳಿ 11ಜನ ಜೂಜು ಕೋರರ ಬಂಧನ, ₹.14,500 ಜಪ್ತಿ
ಸಾರ್ವಜನಿಕ ಸ್ಥಳದಲ್ಲಿ ಜುಜಾಟದಲ್ಲಿ ತೊಡಗಿದ್ದ ಆರೋಪದ ಮೇಲೆ ಎಸ್. ಪಿ. ಪ್ರದೀಪ್ ಗುಂಟಿ ಅವರ ನಿರ್ದೇಶನ ಮೇರೆಗೆ ಖಚಿತ ಮಾಹಿತಿ ಮೇರೆಗೆ ಡಿವೈಎಸ್ಪಿ ಮಡೊಳಪ್ಪ ಅವರ ನೇತೃತ್ವದಲ್ಲಿ ದಾಳಿ ನಡೆಸಲಾದ ಘಟನೆ ಪಟ್ಟಣದ ಹಳೆ ಆರ್ ಟಿ ಓ ಚೆಕ್ ಪೋಸ್ಟ್ ಮತ್ತು ಚಿದ್ರಿ ಬೈಪಾಸ್ ಬಳಿ ಸೋಮವಾರ ರಾತ್ರಿ 8ಕ್ಕೆ ನಡೆದಿದೆ. ಬಂಧಿತ 11ಜನ ಆರೋಪಿತರಿಂದ ₹14,500 ಜಪ್ತಿ ಮಾಡಿಕೊಂಡು ಹುಮ್ನಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪಿ ಎಸ್ ಐ ಸುರೇಶ್ ಕುಮಾರ್ ಅವರು ತಿಳಿಸಿದ್ದಾರೆ.