ಸಿರವಾರ: ಸಿರವಾರ : ನೀರು ಕುಡಿಯಲು ಕಾಲುವೆಗೆ ಇಳಿದವ ನೀರು ಪಾಲು
Sirwar, Raichur | Oct 18, 2025 ಕುರಿ ಮೇಯಿಸಲು ತೆರಳಿದ್ದ ಯುವಕ ಊಟ ಮಾಡಿ, ನೀರು ಕುಡಿಯಲು ಕಾಲುವೆಗೆ ಇಳಿದಿದ್ದ ವೇಳೆ ಕಾಲು ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋದ ಘಟನೆ ಸಿರವಾರ ತಾಲೂಕಿನ ಗುಡಿಹಾಳ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಸಮೀಪದ ಗುಡಿಹಾಳ ಗ್ರಾಮದ ಬಳಿಯ ತುಂಗಭದ್ರ ಎಡದಂಡೆ ಕಾಲುವೆಗೆ ನೀರು ಕುಡಿಯಲು ಇಳಿದ ಅದೇ ಗ್ರಾಮದ ಯುವಕ ಯಮನೂರು ಬೂದೆಪ್ಪ(20) ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಸ್ಥಳದಲ್ಲಿದ್ದ ಯುವಕನೊಬ್ಬ ನೋಡಿ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾನೆ. ಸ್ಥಳೀಯರು ಶೋಧಕಾರ್ಯ ನಡೆಸಿದ್ದಾರೆ.