ಲಿಂಗಸೂರು: ಈರುಳ್ಳಿಗೆ ಬೆಲೆ ಇಲ್ಲದೆ ಕಂಗಾಲಾದ ರೋಡಲಬಂಡ ಗ್ರಾಮದ ರೈತ ರಂಗಪ್ಪ ಅಳಲು
ಈರುಳ್ಳಿಗೆ ಬೆಲೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯ ಲಿಂಗಸೂಗೂರ ತಾಲೂಕಿನ ರೋಡಲಬಂಡ ಗ್ರಾಮದ ರೈತ ರಂಗಪ್ಪ ತನ್ನ ಅಳಲು ತೋಡಿಕೊಂಡಿದ್ದಾನೆ. ಭಾನುವಾರ ಮಧ್ಯಾನ ಜಮೀನಿನಲ್ಲಿ ಕಿತ್ತಿ ಹಾಕಿರುವ ಈರುಳ್ಳಿ ಕುರಿತು ತೀವ್ರ ನೊಂದು ಮಾತನಾಡಿ, ಎಕರೆಗೆ 15 ರಿಂದ 20 ಸಾವಿರ ರೂಪಾಯಿ ಖರ್ಚು ಮಾಡಿದ್ದು ಈಗ ಮಾರಾಟಕ್ಕೆ ತೆಗೆದುಕೊಂಡು ಹೋಗಿರುವ ವಾಹನದ ಬಾಡಿಗೆಯೂ ಕೂಡ ಬರುತ್ತಿಲ್ಲ ಇದರಿಂದ ತುಂಬಾ ತೊಂದರೆ ಅನುಭವಿಸುವಂತಾಗಿದೆ ಎಂದು ರೈತ ನೋವಿನಿಂದ ಮಾತನಾಡಿದ್ದಾರೆ. ಸರ್ಕಾರ ಪರಿಹಾರ ನೀಡಬೇಕು ಎಂದು ವಿನಂತಿಸಿದ್ದಾರೆ.