ಚಿತ್ರದುರ್ಗ: ನಗರದ ಮಾರುಕಟ್ಟೆಯಲ್ಲಿ ಜಿಎಸ್ ಟಿ ಬೆಲೆ ಇಳಿಕೆ ಬಗ್ಗೆ ವ್ಯಾಪಾರಸ್ಥರೊಂದಿಗೆ ಸಂಸದ ಗೋವಿಂದ ಕಾರಜೋಳ ಚರ್ಚೆ
ಚಿತ್ರದುರ್ಗ:-ನಗರದ ಮಾರುಕಟ್ಟೆ ಆವರಣದಲ್ಲಿ ಭಾನುವಾರ ಮಧ್ಯಾಹ್ನ 2 ವ್ಯಾಪಾರಸ್ಥರೊಂದಿಗೆ ಜಿಎಸ್ ಟಿ ಬೆಲೆ ಇಳಿಕೆ ಬಗ್ಗೆ ಸಂಸದ ಗೋವಿಂದ ಕಾರಜೋಳ ಚರ್ಚಿಸಿದರು. ಪ್ರಧಾನಿ ನರೇಂದ್ರ ಮೋದಿಯವರು ಜಿಎಸ್ಟಿ ಬೆಲೆ ಇಳಿಕೆ ಮಾಡಿದ್ದರ ಬಗ್ಗೆ ವ್ಯಾಪಾರಸ್ಥರೊಂದಿಗೆ ಚರ್ಚಿಸಿ ಜಿಎಸ್ಟಿ ಪರಿಷ್ಕರಣೆಯ ಬಗ್ಗೆ ಸಾಧಕ ಬಾದಕಗಳ ಬಗ್ಗೆ ವಿಚಾರಿಸಿದರು, ಜಿಎಸ್ ಟಿ ಪರಿಷ್ಕರಣೆಯಿಂದ ವ್ಯಾಪಾರ ವಹಿವಾಟು ಹೆಚ್ಚಿದೆ ದಸರಾ ಹಬ್ಬದ ಭರಾಟೆಯಲ್ಲಿ ಗ್ರಾಹಕರು ತಮಗೆ ಬೇಕಾದ ವಸ್ತುಗಳನ್ನು ಅಗ್ಗದ ದರದಲ್ಲಿ ಖರೀದಿ ಮಾಡುತ್ತಿದ್ದಾರೆ ಎಂದು ವ್ಯಾಪಾರಸ್ಥರು ಸಂತಸ ವ್ಯಕ್ತಪಡಿಸಿದರು. ಅಷ್ಟೇ ಅಲ್ಲದೆ ಸ್ವದೇಶಿ ಉತ್ಪನ್ನಗಳ ಬಳಕೆಯ ಕುರಿತಾಗಿ ಸಂಸದರು ಜಾಗೃತಿ ಮೂಡಿಸಿದರು.