ರಾಣೇಬೆನ್ನೂರು: ರಾಣೆಬೆನ್ನೂರು ಕೃಷಿ ಉತ್ಪನ್ನ ಮಾರುಕಟ್ಟೆಗೆ ಜಿಲ್ಲಾಧಿಕಾರಿ ವಿಜಯಮಹಾಂತೇಶ ಭೇಟಿ, ರೈತ ಭವನ ಪರಿಶೀಲನೆ
ರಾಣೇಬೆನ್ನೂರ ತಾಲೂಕಿನಲ್ಲಿ ನೂತನವಾಗಿ ನಿರ್ಮಾಣವಾದ ಕೃಷಿ ಉತ್ಪನ್ನ ಮಾರುಕಟ್ಟೆಯ ರೈತ ಭವನವನ್ನು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ್ ದಾನಮ್ಮನವರ ಭೇಟಿ ನೀಡಿ ಪರಿಶೀಲಿಸಿದರು. ರಾಷ್ಟ್ರೀಯ ಹೆದ್ದಾರಿ 48 ಕ್ಕೆ ಹೊಂದಿಕೊಂಡು ಹೂಲಿಹಳ್ಳಿ-ಕೂನಬೇವು ಉಪ ಮಾರುಕಟ್ಟೆ (ಮೆಗಾ ಮಾರುಕಟ್ಟೆ) ಪ್ರಾಂಗಣವು 220 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಯಾಗಿದೆ, ಮಾರುಕಟ್ಟೆ ಪ್ರಾಂಗಣವು 518 ಸಂಖ್ಯೆ ನಿವೇಶನಗಳನ್ನು ಹೊಂದಿದ್ದು ಅಗತ್ಯ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದರು. ಮೆಗಾ ಮಾರುಕಟ್ಟೆಯು ಸುಸಜ್ಜಿತವಾದ ಆಡಳಿತ ಕಚೇರಿ, ವ್ಯವಸ್ಥಿತವಾದ ಟೆಂಡರ್ ಹಾಲ್ ರೈತ ಭವನ, ಅತಿಥಿ ಗೃಹ, ಸುಸಜ್ಜಿತವಾದ ಟ್ರಕ್ ಟರ್ಮಿನಲ್, ಕ್ಯಾಂಟೀನ್ ಹೊಂದಿದೆ ಎಂದರು.