ಕಲಬುರಗಿ : ಚಿತ್ತಾಪುರ ತಾಲೂಕಿನ ಮಾಡಬೂಳ ಪೊಲೀಸ್ ಠಾಣೆ ಸಮೀಪ ಕಾರ್ ಮತ್ತು ಜೀಪ್ ಮಧ್ಯೆ ಡಿಕ್ಕಿ ಸಂಭವಿಸಿದ ಪರಿಣಾಮ ಸ್ಥಳದಲ್ಲೇ ಓರ್ವ ವ್ಯಕ್ತಿ ಮೃತ ಪಟ್ಟಿದ್ದು, ಆರು ಜನರಿಗೆ ಗಂಭೀರ ಗಾಯಗಳಾಗಿರುವ ಘಟನೆ ಡಿ12 ರಂದು ಸಂಜೆ 4 ಗಂಟೆಗೆ ಜರುಗಿದೆ. ಹರಳಯ್ಯ ಎನ್ನುವವರು ಸ್ಥಳದಲ್ಲೇ ಮೃತ ಪಟ್ಟ ದುರ್ದೈವಿ. ಕಾರ್'ನಲ್ಲಿದ್ದವರು ಸೇಡಂನಿಂದ ಕಲಬುರಗಿಗೆ ತೆರಳುತ್ತಿದ್ದರು. ಜೀಪ್'ನಲ್ಲಿದ್ದವರು ಕಲಬುರಗಿಯಿಂದ ಮಳಖೇಡ್'ಗೆ ತೆರಳುತ್ತಿದ್ದಾಗ ಈ ಘಟನೆ ಜರಗಿದೆ ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಾಡಬೂಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ