ಬೆಂಗಳೂರಿನಲ್ಲಿ ಲೇಡಿ ಫಿಟೈಸ್ ಮತ್ತು ನ್ಯೂಟ್ರಿಷಿಯನ್ ಇನ್ಸುಯೆನ್ಸರ್ ಆಗಿ ಕೆಲಸ ಮಾಡುತ್ತಿದ್ದ ಯುವತಿಗೆ ಇನ್ಸಾಗ್ರಾಮ್ ಮತ್ತು ವಾಟ್ಸಾಪ್ ನಲ್ಲಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿ, ಪ್ರೀತಿಸುತ್ತೇನೆ ಎಂದು ಹೇಳಿ ಭೇಟಿಯಾಗಲು ಹರಿಯಾಣದಿಂದ ಬೆಂಗಳೂರಿಗೆ ಬಂದ ಸುಧೀರ್ ಕುಮಾರ್ ಎಂಬಾತನನ್ನು ದಕ್ಷಿಣ ವಿಭಾಗ ಮಹಿಳಾ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಯುವತಿ ತನ್ನ ಜಿಮ್ ಬಳಿ ವಿಚಾರಣೆ ನಡೆಸುತ್ತಿದ್ದ ಆರೋಪಿಯನ್ನು ಪೊಲೀಸರಿಗೆ ದೂರು ನೀಡಿದ್ದಳು.