ತುರುವನೂರು ಬೆಳಘಟ್ಟ ರಸ್ತೆಯಲ್ಲಿ ಖಾಸಗಿ ಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತ ನಡೆದು ಇಬ್ಬರು ಸ್ಥಳದಲ್ಲೆ ಮೃತಪಟ್ಟ ಘಟನೆ ನಡೆದಿದೆ. ಮಂಗಳವಾರ ಸಂಜೆ 6.30 ರ ವೇಳೆ ಘಟನೆ ನಡೆದಿದ್ದು ಬೈಕ್ ನಲ್ಲಿದ್ದ ಇಬ್ಬರು ಯುವಕರು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಇನ್ನೂ ಬೆಳಗಟ್ಟ ತುರುವನೂರು ರಸ್ತೆಯಲ್ಲಿ ನಡೆದಿದ್ದು ಈ ಭೀಕರ ಅಪಘಾತದಲ್ಲಿ ಭೀಮಗೊಂಡನಹಳ್ಳಿ ಗ್ರಾಮದ 28 ವರ್ಷದ ತಿಪ್ಪೇಸ್ವಾಮಿ ಹಾಗೂ 42 ವರ್ಷದ ಪ್ರಭು ಗಂಬೀರವಾಗಿ ಗಾಯಗೊಂಡು ಸ್ಥಳದಲ್ಲೆ ಮೃತಪಟ್ಟಿದ್ದಾರೆ.