ರಾಯಚೂರು: ಮುರಾನಪುರದಲ್ಲಿ ಸಾರಿಗೆ ಬಸ್ ಟೈಯರ್ ಭಯಾನಕ ರೀತಿಯಲ್ಲಿ ಬ್ಲಾಸ್ಟ್; ವೃದ್ಧ ಪ್ರಯಾಣಿಕನ ಕಾಲು ಮುರಿತ; ಇನ್ನಿತರ ಪ್ರಯಾಣಿಕರಿಗೆ ಗಾಯ
ರಾಯಚೂರು ತಾಲೂಕಿನ ಮುರಾನಪುರ ಗ್ರಾಮದಲ್ಲಿ ಕೆಎಸ್ಆರ್ಟಿಸಿ ಸಾರಿಗೆ ಬಸ್ ಟೈಯರ್ ಬ್ಲಾಸ್ಟ್ ಆಗಿ ವೃದ್ಧ ಪ್ರಯಾಣಿಕನ ಕಾಲು ಮುರಿದ ಘಟನೆ ಸೆ.23 ರ ಮಂಗಳವಾರ ಸಂಜೆ ಸಂಭವಿಸಿದೆ ಎನ್ನಲಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ. ದೇವದುರ್ಗದಿಂದ ರಾಯಚೂರಿಗೆ ಬರುತ್ತಿದ್ದ ಸಾರಿಗೆ ಬಸ್ ಏಕಾಏಕಿ ಟೈರ್ ಬ್ಲಾಸ್ಟ್ ಆಗಿದೆ. ಇದರ ಪರಿಣಾಮ ಟೈರ್ ಇರುವ ಸೀಟಿನಲ್ಲಿ ಕುಳಿತಿದ್ದ ವೃದ್ಧನ ಎರಡು ಕಾಲುಗಳಿಗೆ ಗಂಭೀರ ಗಾಯಗಳಾಗಿವೆ. ಇನ್ನಿತರ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಘಟನೆಗೆ ಹಳೆಯ ಟೈರ್ ಗಳನ್ನ ಬದಲಿಸದೆ ಹಾಗೆ ಓಡಿಸಿದ ಕಾರಣ ಬ್ಲಾಸ್ಟ್ ಆಗಿದೆ ಎನ್ನಲಾಗಿದೆ.