ಬೆಂಗಳೂರು ಉತ್ತರ: ಧರ್ಮಸ್ಥಳದ ಬಗ್ಗೆ ಹೆಚ್ಚು ಕಾಳಜಿ ಕಾಂಗ್ರೆಸ್ ಸರ್ಕಾರಕ್ಕಿದೆ: ನಗರದಲ್ಲಿ ಮಾಜಿ ಸಂಸದ ಡಿಕೆ ಸುರೇಶ್
ಧರ್ಮಸ್ಥಳ ವಿಚಾರವಾಗಿ ಭಾನುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮಾಧ್ಯಮಗಳ ಜೊತೆ ಸದಾಶಿವನಗರದಲ್ಲಿ ಮಾತನಾಡಿದ ಮಾಜಿ ಸಂಸದ ಡಿಕೆ ಸುರೇಶ್ ಅವರು, ಬಿಜೆಪಿ ನಾಯಕರು ಧರ್ಮಸ್ಥಳ ಉಳಿಸಿ ಅಂತ ಹೋಗೋದು ರಾಜಕೀಯ, ಧರ್ಮಸ್ಥಳಕ್ಕೆ ತನ್ನದೆ ಆದ ಮಾನ್ಯತೆ, ಭಕ್ತರನ್ನು ಹೊಂದಿರುವ ಶ್ರೀ ಕ್ಷೇತ್ರ. ಶ್ರೀ ಕ್ಷೇತ್ರದ ಮೇಲೆ ಹಲವು ಅಪಾದನೆಗಳು ಬರ್ತಿವೆ. ಬಂದಂತ ದೂರುಗಳನ್ನ ಸಹಾನುಭೂತಿಯಿಂದ ನೋಡಬೇಕಾಗುತ್ತೆ. ಆಗಾಗಿ ಎಸ್ ಐಟಿಯನ್ನ ಸರ್ಕಾರ ರಚನೆ ಮಾಡಿದೆ. ಧರ್ಮಸ್ಥಳದ ಬಗ್ಗೆ ಹೆಚ್ಚು ಕಾಳಜಿ, ನಂಬಿಕೆ ಇರೋದು ಕಾಂಗ್ರೆಸ್ ಗೆ ಎಂದರು.