ದಾಂಡೇಲಿ: ವಕ್ಫ್ ಬೋರ್ಡ್ ಕಾಯ್ದೆ ತಿದ್ದುಪಡಿ ವಿರೋಧಿಸಿ ಬಾರತ್ ಬಂದ್ ಹೋರಾಟ ಅ.06ಕ್ಕೆ ಮುಂದೂಡಿಕೆ, ನಗರದಲ್ಲಿ ಮುಸ್ಲಿಂ ಮುಖಂಡರಿಂದ ಮಾಹಿತಿ
ದಾಂಡೇಲಿ: ಕೇಂದ್ರ ಸರ್ಕಾರದ ವಕ್ಫ್ ಬೋರ್ಡ್ ಕಾಯಿದೆಯ ತಿದ್ದುಪಡಿ ವಿರೋಧಿಸಿ ಅಕ್ಟೊ ಬರ್ 03 ರಂದು ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ವತಿಯಿಂದ ರಾಷ್ಟ್ರವ್ಯಾಪಿ ಆಯೋಜಿಸಲು ನಿರ್ಧರಿಸಲಾಗಿದ್ದ ಭಾರತ್ ಬಂದ್ ಹೋರಾಟವನ್ನು ದಾಂಡೇಲಿಯಲ್ಲಿ ಶ್ರೀ ದಾಂಡೇಲಪ್ಪಾ ಜಾತ್ರೋತ್ಸವದ ಹಿನ್ನಲೆಯಲ್ಲಿ ದಾಂಡೇಲಿ ಬಂದ್ ಕಾರ್ಯಕ್ರಮವನ್ನು ಅ. 06 ರಂದು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಮುಸ್ಲಿಂ ಮುಖಂಡ ಜಾಫರ್ ಮಾಸನಕಟ್ಟಿ ಅವರು ಹೇಳಿದರು. ಅವರು ಇಂದು ಬುಧವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ದಾಂಡೇಲಿ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿದರು. ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಅಕ್ಟೊಬರ್ 03 ರಂದು ಭಾರತ ಬಂದ್ ಗೆ ಕರೆ ನೀಡಿತ್ತು,