ಹುಮ್ನಾಬಾದ್: ನಗರದಲ್ಲಿ ಜೆಸ್ಕಾಂ ವತಿಯಿಂದ ವಿದ್ಯುತ್ ಸುರಕ್ಷತಾ ಜಾಗೃತಿ ಕಾರ್ಯಾಗಾರ
Homnabad, Bidar | Nov 11, 2025 ನಗರದಲ್ಲಿ ಜೆಸ್ಕಾಂ ವತಿಯಿಂದ ವಿದ್ಯುತ್ ಸುರಕ್ಷತಾ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜೆಸ್ಕಾಂ ಸಿಬ್ಬಂದಿಗಾಗಿ ಮಂಗಳವಾರ ಮಧ್ಯಾಹ್ನ 12ಕ್ಕೆ ವಿಶೇಷ ತರಬೇತಿ ಕಾರ್ಯಾಗಾರ ಇಲ್ಲಿನ ರಾಮ್ ಮತ್ತು ರಾಜ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಸುರಕ್ಷತಾ ಕ್ರಮಗಳ ಕುರಿತು ಅರೋಗ್ಯ ಅಧಿಕಾರಿ ಡಾ. ಮುಸ್ತಫಾ ಅವರು ವಿಶೇಷ ಉಪನ್ಯಾಸ ಮಂಡಿಸಿದರು. ಅಧ್ಯಕ್ಷತೆಯನ್ನು ಶಿಕ್ಷಣ ಸಂಸ್ಥೆ ಕೋಶಾಧ್ಯಕ್ಷ ನಾರಾಯಣರಾವ ಜಾಜಿ ಅವರು ವಹಿಸಿದ್ದರು. ಅಗ್ನಿ ಅವಘಡ ಮತ್ತು ಪರಿಹಾರ ಕ್ರಮ ಕುರಿತು ಅಗ್ನಿಶಾಮಕ ಸಲಾ ವುದ್ದಿನ್ ಮಾರ್ಗದರ್ಶನ ನೀಡಿದರು. ಎ ಇ ಇ ಗಳಾದ ಗುರುಶಾಂತ ವಾರದ್, ರಮೇಶ ಮಾಯಿನಳ್ಳಿ ಹಾಗೂ ಜೆಸ್ಕಾಂ ಅಧಿಕಾರಿ ಮತ್ತು ಸಿಬ್ಬಂದಿ ಇದ್ದರು.