ಶಿಡ್ಲಘಟ್ಟ: ಕುತ್ತಾಂಡಹಳ್ಳಿ ರಸ್ತೆ ‘ಕೆಸರುಗದ್ದೆ’ಯಂತಾಗಿದೆ – ಸಂಚಾರವೇ ನರಕಯಾತನೆ!
ದೇವರಮಳ್ಳೂರು–ಕುತ್ತಾಂಡಹಳ್ಳಿ–ದೊರನಾಯಕನಹಳ್ಳಿ ಸಂಪರ್ಕ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಜನರು ಪ್ರತಿನಿತ್ಯ ಸಂಚಾರದ ನರಕ ಅನುಭವಿಸುತ್ತಿದ್ದಾರೆ. ಗುಂಡಿಗಳು, ಕೆಸರು, ನೀರು ತುಂಬಿದ ರಸ್ತೆಯಿಂದ ವಾಹನ ಸವಾರರು ಪರದಾಡುತ್ತಿದ್ದಾರೆ. ಶಾಲಾ ಮಕ್ಕಳು, ರೈತರು ಹಾಗೂ ಕೆಲಸಕ್ಕೆ ತೆರಳುವವರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಹಲವು ವರ್ಷಗಳಿಂದ ದುರಸ್ತಿ ಆಗದ ಈ ರಸ್ತೆಯ ಕುರಿತು ಜನಪ್ರತಿನಿಧಿಗಳು ಹಾಗೂ ಇಲಾಖೆಯ ನಿರ್ಲಕ್ಷ್ಯಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.