ಗ್ರಾಪಂ ಅಧಿಕಾರಿಗಳ ನಿರ್ಲಕ್ಷ್ಯ: ಜೀಡಮಾಕನಹಳ್ಳಿ ಗ್ರಾಮದ ಸ್ಮಶಾನವನ್ನು ಗ್ರಾಮಸ್ಥರಿಂದಲೇ ಸ್ವಚ್ಚತೆ ಕೆಜಿಎಫ್ ತಾಲ್ಲುಕಿನ ಜೀಡಮಾಕನಹಳ್ಳಿ ಗ್ರಾಮಕ್ಕೆ ಸೇರಿದ ಸ್ಮಶಾನದಲ್ಲಿ ಸುಮಾರು ವರ್ಷಗಳಿಂದ ಬೃಹತ್ ಆಗಿ ಬೆಳೆದಿದ್ದ ಗಿಡ-ಮರಗಳ ಬೆಳೆದಿದ್ದು ಗ್ರಾಮ ಪಂಚಾಯಿತಿ ಅಧಿಕಾರಿಗಳು ಅಭಿವೃದ್ಧಿ ಪಡಿಸಲು ವರ್ಷಗಳೇ ಕಳೆದರೂ ಯಾವುದೇ ರೀತಿಯಲ್ಲಿ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ್ದಾರೆ. ಈ ಹಿನ್ನೆಲೆ ಗ್ರಾಮಸ್ಥರೇ ವೈಯಕ್ತಿಕ ಹಣದಲ್ಲಿ ಸೋಮವಾರ ಸ್ವಚ್ಚತೆ ಮಾಡಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಕೆಜಿಎಫ್ ತಾಲೂಕಿನ ಎನ್ ಜಿ ಹುಲ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೀಡಮಾಕನಹಳ್ಳಿ ಗ್ರಾಮಕ್ಕೆ ಸೇರಿರುವ ಸುಮಾರು ೨೧ ಗುಂಟೆ ಜಾಗದ ಸ್ಮಶಾನದಲ್ಲಿ ಸು