ಮಾನ್ವಿ: ಮುಸ್ಟೂರು ಗ್ರಾಮದ ಹಳ್ಳಕ್ಕೆ ಬಂದ ಅಪಾರ ಪ್ರಮಾಣದ ನೀರು, ತಾತ್ಕಾಲಿಕ ಸೇತುವೆ ಮುಳುಗಡೆ
Manvi, Raichur | Sep 27, 2025 ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಮುಸ್ಟೂರು ಗ್ರಾಮದ ಹಳ್ಳಕ್ಕೆ ಅಪಾರ ಪ್ರಮಾಣದ ನೀರು ಹರಿದು ಬಂದು ತಾತ್ಕಾಲಿಕವಾಗಿ ನಿರ್ಮಿಸಿದ ಸೇತುವೆ ಮುಳುಗಡೆಯಾಗಿದೆ. ಶನಿವಾರ ಮಧ್ಯಾಹ್ನ ಸೇತುವೆ ಮುಳುಗಡೆಯಾಗಿದ್ದರಿಂದ ಸಾರ್ವಜನಿಕರ ಓಡಾಟಕ್ಕೆ ತುಂಬಾ ತೊಂದರೆ ಉಂಟಾಗಿದೆ. ಮುಷ್ಟೂರು ಗ್ರಾಮದ ಜನರು ಜಾಗೀರಪ್ಪನೂರ ಸೇರಿದಂತೆ ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿದ್ದು ಈ ಗ್ರಾಮಗಳ ಜನರು ಮಾನ್ವಿ ಪಟ್ಟಣಕ್ಕೆ ಬರಲು ರಂಗದಾಳ ಗ್ರಾಮದ ಮೂಲಕ ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.