ಬೆಂಗಳೂರು ಉತ್ತರ: ರಸ್ತೆಯಲ್ಲಿ ಕಸ ಹಾಕಿದರೆ ಈಗ ಮನೆಯ ಬಾಗಿಲಲ್ಲೇ ದಂಡ!
ಬೆಂಗಳೂರಿನಲ್ಲಿ ಗುರುವಾರ ಬೆಳಗ್ಗೆ ೧೧ ಗಂಟೆ ಸುಮಾರಿಗೆ ಜಿಬಿಎ ಕಸದಾಯಿಗಳ ವಿರುದ್ಧ ಕಠಿಣ ಕ್ರಮ ಆರಂಭಿಸಿದೆ! ರಸ್ತೆಗಳಲ್ಲಿ ಕಸ ಎಸೆದವರಿಗೆ ಅದೇ ಕಸವನ್ನು ಅವರ ಮನೆ ಬಾಗಿಲಿಗೆ ಹಿಂತಿರುಗಿಸಿ, ₹10,000 ವರೆಗೆ ದಂಡ ವಿಧಿಸಲಾಗುತ್ತಿದೆ. ಈ ಕ್ರಮದ ಉದ್ದೇಶ ನಾಗರಿಕರಲ್ಲಿ ಜವಾಬ್ದಾರಿತನ ಮೂಡಿಸುವುದು ಹಾಗೂ ನಗರವನ್ನು ಸ್ವಚ್ಛವಾಗಿಡುವುದು. ನಾಗರಿಕರು ಈ ಕ್ರಮವನ್ನು ಸ್ವಾಗತಿಸಿ, “ಇದು ಬೆಂಗಳೂರನ್ನು ಸ್ವಚ್ಛವಾಗಿಡಲು ಅಗತ್ಯವಾದ ಹೆಜ್ಜೆ” ಎಂದು ಅಭಿಪ್ರಾಯಪಟ್ಟಿದ್ದಾರೆ.