ನಗರದ ಬಸವ ಕೇಂದ್ರದಲ್ಲಿ ಮರುಳ ಶಂಕರದೇವ ಪ್ರಸಾದ ನಿಲಯವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಅವರು, ಜಗಜ್ಯೋತಿ ಬಸವಣ್ಣನವರು ಸಮಾಜಕ್ಕೆ ಹೊಸ ದಾರಿ ತೋರಿದ ಮಹಾನ್ ಚಿಂತಕರಾಗಿದ್ದು, ಅವರ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು. ಸಮಾನತೆ, ಶಾಂತಿ ಹಾಗೂ ಶ್ರಮದ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಬಸವಣ್ಣನವರ ತತ್ವಗಳು ನಮಗೆ ಸದಾ ಪ್ರೇರಣೆಯಾಗುತ್ತವೆ. ಬಸವಣ್ಣನವರ ಜೀವನ ಮತ್ತು ಸಂದೇಶಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಂಡಾಗ ಉತ್ತಮ ಜೀವನ ನಡೆಸಲು ಸಾಧ್ಯ ಎಂದು ತಿಳಿಸಿದರು.