ರಾಯಚೂರು: ಬಿಳಿ ಬೋರ್ಡ್ ಹಾಕಿಕೊಂಡು ಬಾಡಿಗೆ ಓಡಿಸುವ ವಾಹನಗಳ ವಿರುದ್ಧ ಕ್ರಮಕ್ಕೆ ನಗರದಲ್ಲಿ ಟ್ಯಾಕ್ಸಿ ಚಾಲಕರ ಟ್ರೇಡ್ ಯೂನಿಯನ್ ಜಿಲ್ಲಾಧಿಕಾರಿಗೆ ಮನವಿ
ರಾಜ್ಯ ಸೇರಿದಂತೆ ರಾಯಚೂರು ಜಿಲ್ಲೆಯಲ್ಲಿ ವಾಹನಗಳಿಗೆ ಬಿಳಿ ಬೋರ್ಡ್ ಗಳನ್ನ ಹಾಕಿಕೊಂಡು ಬಾಡಿಗೆಗೆ ಓಡಿಸುತ್ತಿರುವ ವಾಹನಗಳು ಮತ್ತು ಅವುಗಳ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಟ್ಯಾಕ್ಸಿ ಚಾಲಕರ ಟ್ರೇಡ್ ಯೂನಿಯನ್ ವತಿಯಿಂದ ರಾಯಚೂರು ನಗರದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಲಾಗಿದೆ. ಬಿಳಿ ಬೋಲ್ಡ್ ಗಳನ್ನ ಹಾಕಿಕೊಂಡು ಯಾಪ್ಗಳ ಮೂಲಕ ಬಾಡಿಗೆ ಓಡಿಸುತ್ತಿದ್ದು ಇದರಿಂದ ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಲಾಗುತ್ತಿದೆ ಅಲ್ಲದೆ ನಾವು ಹಳದಿ ಬೋರ್ಡ್ ಗಳನ್ನು ಹಾಕಿಕೊಂಡು ಸರಕಾರಕ್ಕೆ ತೆರಿಗೆ ಕಟ್ಟುವವರಿಗೆ ತುಂಬಾ ತೊಂದರೆ ಉಂಟು ಮಾಡುತ್ತಿದ್ದಾರೆ ಆದ್ದರಿಂದ ಕೂಡಲೇ ಅಂತಹ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿನಂತಿಸಿದರು.