ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು ದೊಡ್ಡಬಳ್ಳಾಪುರ ತಾಲೂಕಿನ ಮಧುರೆ ಹೋಬಳಿಯ ಕಾಡನೂರು ಪಾಳ್ಯ ಗ್ರಾಮದಲ್ಲಿ ದ್ವಿಚಕ್ರ ವಾಹನದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನ ಗ್ರಾಮಸ್ಥರು ಹಿಡಿದು ದೊಡ್ಡಬೆಳವಂಗಲ ಪೊಲೀಸರಿಗೆ ಒಪ್ಪಿಸಿದ್ದಾರೆ. ಕಾಡನೂರು ಪಾಳ್ಯ ಊರಿಂದಾಚೆ ಮನೆ ಕಟ್ಟಿಕೊಂಡಿರುವ ಮುನಿರಾಜು ಎಂಬುವವರ ಮನೆ ಬಳಿ ಹೆಲ್ಮೆಟ್ ಹಾಕಿಕೊಂಡು ದ್ವಿಚಕ್ರ ವಾಹನದಲ್ಲಿ ಅನುಮಾನಾಸ್ಪದವಾಗಿ ನಿಂತಿದ್ದನ್ನು ಕಂಡ ಗ್ರಾಮದ ಯುವಕ ಸಿದ್ದರಾಜು ಗಮನಿಸಿ ಅವರನ್ನು ವಿಚಾರಿಸಲು ಹೋದಾಗ ದ್ವಿಚಕ್ರ ವಾಹನ ಅಲ್ಲೇ ಬಿಟ್ಟು ಪರಾರಿಯಾಗಲು ಯತ್ನಿಸಿದ್ದಾರೆ. ತಕ್ಷಣ ಯುವಕ ಸಿದ್ದರಾಜ