ಶಿರಹಟ್ಟಿ: ದ್ವಿತೀಯ ಪಿಯುನಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ರವೀನಾ ಲಮಾಣಿಗೆ ಆದ್ರಳ್ಳಿ ತಾಂಡಾದಲ್ಲಿ ಶಾಸಕ ಚಂದ್ರು ಲಮಾಣಿ ಸನ್ಮಾನ
ತಾಲ್ಲೂಕಿನ ಆದರಹಳ್ಳಿ ತಾಂಡಾದ ವಿದ್ಯಾರ್ಥಿನಿ ರವೀನಾ ಸೋಮಪ್ಪ ಲಮಾಣಿ ಪಿಯು ಕಲಾ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದು, ಇದು ನಮ್ಮ ತಾಲೂಕು,ಜಿಲ್ಲೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದು, ಇನ್ನೂ ಹೆಚ್ಚು ಓದಿ ರಾಷ್ಟ್ರ ಮಟ್ಟದಲ್ಲಿ ಉನ್ನತ ಸ್ಥಾನ ಪಡೆದು ತಂದೆತಾಯಿ ಊರಿನ ಕೀರ್ತಿ ಪತಾಕೆ ಹಾರಿಸಿ ಎಂದು ಶಾಸಕ ಡಾ.ಚಂದ್ರು ಲಮಾಣಿ ಹೇಳಿದರು.ಅವರು ಬುಧವಾರ ರಾತ್ರಿ ೦೯ಗಂಟೆಗೆ ಆದ್ರಳ್ಳಿ ತಾಂಡಾದ ರವೀನಾ ಸೋಮಪ್ಪ ಲಮಾಣಿ ಪಿಯು ಕಲಾ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ವಿಷಯ ತಿಳಿದು, ರವೀನಾ ಮನೆಗೆ ತೆರಳಿ ಸನ್ಮಾನಿಸಿದರು.