ಯಳಂದೂರು: ಯಳಂದೂರಿನಲ್ಲಿ ಶಿಕ್ಷಕಿಯಿಂದ ವಿದ್ಯಾರ್ಥಿಗೆ ಹಲ್ಲೆ: ಬಿಇಒ ಮನೆಗೆ ಭೇಟಿ,ಪೋಷಕರ ಆಕ್ರೋಶ
ಚಾಮರಾಜನಗರ ಜಿಲ್ಲೆಯ ಯಳಂದೂರಿನಎಸ್ ಡಿ ವಿ ಎಸ್ ವಿದ್ಯಾಸಂಸ್ಥೆಯಲ್ಲಿ 5ನೆತರಗತಿ ವ್ಯಾಸಂಗ ಮಾಡುತ್ತಿರುವ ಚಾಮಲಪುರದ ವಿದ್ಯಾರ್ಥಿ ಗುರುಪ್ರಾಸಾದ್ ಎಂಬಾತನಿಗೆ ಶಿಕ್ಷಕಿಯೊಬ್ಬರು ಹಲ್ಲೆ ಮಾಡಿದ್ದಾರೆಈ ಸಂಬಂಧ ಈ ಪ್ರಕರಣ ಯಳಂದೂರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು ಇದರ ಬೆನ್ನಲ್ಲೆವಿದ್ಯಾರ್ಥಿಯ ಮನೆಗೆ ಕ್ಷೇತ್ರಾ ಶಿಕ್ಷಣಾಧಿಕಾರಿ ಮಾರಯ್ಯ ಭೇಟಿ ನೀಡಿ ಪ್ರಕರಣದ ಕುರಿತು ಪರಿಶೀಲನೆ ನಡೆಸಿದ್ದಾರೆ. ಬಿಇಒ ಮಾರಯ್ಯ ಎವರು ಹಲ್ಲೆಗೊಳಗಾದ ವಿದ್ಯಾರ್ಥಿ ಮತ್ತು ಪೋಷಕರನ್ನು ಭೇಟಿ ಮಾಡಿ, ಘಟನೆ ಬಗ್ಗೆ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಪೋಷಕರು ಘಟನೆ ನಡೆದಿದ್ದರ ಯಾರಿಂದಲೂ ಯಾವುದೇ ಸ್ಪಂದನೆ ಇಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.