ಹಾವೇರಿ: ಗಣೇಶ ವಿಸರ್ಜನೆ ವೇಳೆ ಡಿಜೆ ಹಚ್ಚಿದ್ದಕ್ಕೆ ಕಾರ್ಯಕರ್ತರ ಮೇಲೆ ಹಾಕಲಾದ ಎಫ್ಐಆರ್ ಹಿಂಪಡೆಯಿರಿ; ನಗರದಲ್ಲಿ ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ
Haveri, Haveri | Sep 17, 2025 ಗಣೇಶ ವಿಸರ್ಜನೆ ವೇಳೆ ಡಿ.ಜೆ. ಹಚ್ಚಿದ ಆರೋಪದಡಿ ಗಣಪತಿ ಆಯೋಜಕರ ಮೇಲೆ ಹಾಕಲಾದ ಎಫ್‌ಐಆರ್ ಸರ್ಕಾರ ರದ್ದುಗೊಳಿಸಬೇಕು ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು. ಗಣೇಶೋತ್ಸವದ ಸಂದರ್ಭದಲ್ಲಿ ಹಾವೇರಿ ಜಿಲ್ಲೆಯಲ್ಲಿ ಡಿಜೆ ನಿಷೇಧ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ನಗರದಲ್ಲಿ ಬುಧವಾರ ಮಧ್ಯಾನ 2ಕ್ಕೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧಾರವಾಡದಲ್ಲಿಡಿ.ಜೆ ಬಳಸಲು ಅವಕಾಶ ಕಲ್ಪಿಸಿದ್ದಾರೆ. ಬೆಳಗಾವಿ ವಿಭಾಗದಲ್ಲಿ ಡಿಜೆ ಬಳಕೆಗೆ ಅವಕಾಶ ನೀಡಿದ್ದಾರೆ. ಆದರೆ ಹಾವೇರಿ ಜಿಲ್ಲೆಗೆ ಅವಕಾಶ ಮಾಡಿಲ್ಲ, ಡಿಜೆ ಡೆಸಿಬಲ್ ಕಡಿಮೆ ಮಾಡಲು ಕೋರ್ಟ್ ನಿಯಮ ಇದೆ. ಅದನ್ನು ಪಾಲಿಸುವಂತೆ ನೋಡಿಕೊಂಡರೆ ಆಯಿತು. ಇವರು ಗಣೇಶ ಹಬ್ಬದ ಹುರುಪು ಹಾಳು ಮಾಡಿದ್ದಾರೆ ಎಂದು ಕಿಡಿ ಕಾರಿದರು.