ಭಟ್ಕಳ: ಅಂಜುಮನ್ ಕಾಲೇಜಿಗೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಭಟ್ಕಳ : ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಅಂಜುಮನ್ ಕಾಲೇಜಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಕುಮಾರ್ ಎನ್.ಎಂ ಅವರು ಗುರುವಾರ ಮಧ್ಯಾಹ್ನ 3:00 ಗಂಟೆ ಸುಮಾರಿಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಸೈಬರ್ ಅಪರಾಧಗಳು ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ತಿಳಿಸಿ, ಜಾಗೃತಿ ಮೂಡಿಸಿದರು. ವಿದ್ಯಾರ್ಥಿ ಜೀವನವನ್ನು ಭವಿಷ್ಯದ ಉನ್ನತಿಗಾಗಿ ಸದ್ಬಳಕೆ ಮಾಡುವುದರ ಮೂಲಕ ಆದರ್ಶ ನಡುವಳಿಕೆಗಳೊಂದಿಗೆ ಪ್ರಜ್ಞಾವಂತ ನಾಗರಿಕರಾಗಬೇಕೆಂದು ಕರೆ ನೀಡಿದರು.