ದಾಂಡೇಲಿ: ಹಳೆ ದಾಂಡೇಲಿಯ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ನವರಾತ್ರಿ ವೈಭವದ ಜೊತೆಗೆ ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡ ನವಚಂಡಿ ಹೋಮ
ದಾಂಡೇಲಿ : ನಗರದ ಹಳೆ ದಾಂಡೇಲಿಯ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ನವರಾತ್ರಿ ವೈಭವದ ಜೊತೆಗೆ ಹಮ್ಮಿಕೊಂಡಿದ್ದ ನವ ಚಂಡಿ ಹೋಮವು ಶ್ರದ್ಧಾ ಭಕ್ತಿಯಿಂದ ಇಂದು ಬುಧವಾರ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಸಂಪನ್ನಗೊಂಡಿತು. ಸೆಪ್ಟೆಂಬರ್ 22 ರಿಂದ ಆರಂಭಗೊಂಡ ಕಾರ್ಯಕ್ರಮವು ಇಂದು ಬುಧವಾರದವರೆಗೂ ಜರುಗಿತು. ಇಂದು ಬೆಳಗಿನಿಂದಲೆ ವಿವಿಧ ಪೂಜಾರಾಧನೆಗಳೊಂದಿಗೆ ನವಚಂಡಿ ಹೋಮವು ಅಪಾರ ಭಕ್ತರ ಸಮ್ಮುಖದಲ್ಲಿ ಅತ್ಯಂತ ಶ್ರದ್ಧಾಭಕ್ತಿಯಿಂದ ಜರುಗಿತು. ಮಧ್ಯಾಹ್ನ 1 ಗಂಟೆಯಿಂದ ಸಾರ್ವಜನಿಕ ಅನ್ನಸಂಪರ್ಪಣೆಯನ್ನು ಏರ್ಪಡಿಸಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ಶ್ರೀದೇವಿಯ ದರ್ಶನವನ್ನು ಪಡೆದು ಶ್ರೀ ಸ್ವಾಮಿಯ ಪ್ರಸಾದವನ್ನು ಸ್ವೀಕರಿಸಿದರು.