ರಸ್ತೆ ಬದಿಯಲ್ಲೇ ಬೀಡುಬಿಟ್ಟ ಕಾಡುಕೋಣ.! ಬಾಳೆಹೊಳೆ ಜನರಲ್ಲಿ ಆತಂಕ.!
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಪ್ರಾಣಿ ಹಾಗೂ ಮಾನವನ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಬಾಳೆಹೊಳೆ ಗ್ರಾಮದ ಬಳಿ ಕಳೆದ ಎರಡು ಮೂರು ದಿನಗಳಿಂದ ಕಾಡುಕೋಣಗಳು ರಸ್ತೆ ಬದಿಯಲ್ಲಿಯೇ ಬಿಡು ಬಿಟ್ಟಿದ್ದು. ಬಾಳೆಹೊಳೆ ಗ್ರಾಮದ ಜನರು ಆತಂಕದಲ್ಲಿ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಅರಣ್ಯ ಇಲಾಖೆಯ ವಿರುದ್ಧ ಸಾರ್ವಜನಿಕರು ಆಕ್ರೋಶವನ್ನು ಹೊರಹಾಕಿದ್ದಾರೆ.