ಔರಾದ್: ಬಸವಣ್ಣನವರ ಸಪ್ತಸೂತ್ರ ಅಳವಡಿಸಿಕೊಂಡರೆ ಜೀವನ ಸಾರ್ಥಕ : ಪಟ್ಟಣದಲ್ಲಿ ಹಿರಿಯ ಸಾಹಿತಿ ಮಾಣಿಕ ನೇಳ್ಗಿ
Aurad, Bidar | Nov 20, 2025 ಬಸವಣ್ಣನವರ ಸಪ್ತಸೂತ್ರ ಅಳವಡಿಸಿಕೊಂಡರೆ ಜೀವನ ಸಾರ್ಥಕ ಗೊಳ್ಳುತ್ತದೆ ಎಂದು ಹಿರಿಯ ಸಾಹಿತಿ ಮಾಣಿಕ ನೇಳ್ಗಿ ಸಲಹೆ ನೀಡಿದರು. ಪಟ್ಟಣದಲ್ಲಿ ಭಾರತೀಯ ಬಸವ ಬಳಗ ವತಿಯಿಂದ ಗುರುವಾರ ರಾತ್ರಿ 8.30 ಕ್ಕೆ ಆಯೋಜಿಸಿದ ಮನೆಗೊಂದು ಅನುಭವ ಮಂಟಪ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ವಿಶೇಷ ಉಪನ್ಯಾಸ ಮಂಡಿಸಿದರು. ಸಂಜೀವಕುಮಾರ ವಿಲಂಡೆ, ಭಾರತೀಯ ಬಸವ ಬಳಗದ ಗೌರವಾಧ್ಯಕ್ಷ ಮನ್ಮತಪ್ಪ ಹುಗ್ಗೆ, ಕದಳಿ ವೇದಿಕೆ ಮಹಿಳಾ ಘಟಕ ಅಧ್ಯಕ್ಷ ನಂದಿನಿ ಚಿರಂಜೆ ವೇದಿಕೆಯಲ್ಲಿದ್ದರು. ರವೀಂದ್ರ ಮೀಸೆ ಅಧ್ಯಕ್ಷತೆ ವಹಿಸಿದ್ದರು.