ಕೊಳ್ಳೇಗಾಲ: ಸತ್ತೇಗಾಲ ಬೈಪಾಸ್ನಲ್ಲಿ ಅಪಘಾತ: ತಮಿಳುನಾಡಿನ ಬೈಕ್ ಸವಾರನಿಗೆ ಪೆಟ್ಟು
ಸತ್ತೇಗಾಲ ಬೈಪಾಸ್ ರಸ್ತೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ತಮಿಳುನಾಡಿನ ಬೈಕ್ ಸವಾರನೊಬ್ಬನಿಗೆ ಪೆಟ್ಟಾಗಿರುವ ಘಟನೆ ಭಾನುವಾರ ನಡೆದಿದೆ. ಟಿಎನ್ 70 ಎಪಿ 0176 ಸಂಖ್ಯೆಯ ಬೈಕ್ನಲ್ಲಿ ಸಂಚರಿಸುತ್ತಿದ್ದ ತಮಿಳುನಾಡಿನ ವ್ಯಕ್ತಿ, ಕೊಳ್ಳೇಗಾಲ–ಸತ್ತೇಗಾಲ ರಸ್ತೆಯಲ್ಲಿ ಆಯತಪ್ಪಿ ಬೈಕ್ನಿಂದ ಕೆಳಗೆ ಬಿದ್ದಿದ್ದು ಈ ವೇಳೆ ಆತನಿಗೆ ಗಾಯಗಳಾಗಿವೆ.ಸ್ಥಳೀಯರು ತಕ್ಷಣವೇ ಸ್ಪಂದಿಸಿ ಗಾಯಾಳುವನ್ನು ಅಂಬುಲೆನ್ಸ್ ಮೂಲಕ ಕೊಳ್ಳೇಗಾಲದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆಗೊಳಪಡಿಸಿದ್ದಾರೆಘಟನೆಯ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಕ್ರಮ ಕೈಗೊಂಡಿದ್ದಾರೆ.