ತೀರ್ಥಹಳ್ಳಿ: ಬಾಳೆಬೈಲಿನಲ್ಲಿ ಕಾರಿನಲ್ಲಿ ಗೋ ಕದ್ದು ಪರಾರಿ: ಸಿಸಿಟಿವಿಯಲ್ಲಿ ದೃಶ್ಯಸರ
ಇತ್ತೀಚಿಗೆ ತೀರ್ಥಹಳ್ಳಿ ತಾಲೂಕಿನಲ್ಲಿ ಗೋಕಳ್ಳತನ ಸರಾಗವಾಗಿ ನಡೆಯುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಬಾಳೆಬೈಲಿನಲ್ಲಿ ಬುಧವಾರ ಬೆಳಗಿನ ಜಾವ ಕಾರಿನಲ್ಲಿ ಬಂದಂತಹ ಕಿರಾತಕರು ಗೋವಿಂದಣ್ಣ ಕಾರಿನಲ್ಲಿ ತುಂಬಿಕೊಂಡು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ತಾಲೂಕಿನಲ್ಲಿ ಗೋಕಳ್ಳತನಕ್ಕೆ ಅಧಿಕಾರಿಗಳು ಸಾತ್ ನೀಡುತ್ತಿದ್ದಾರಾ ಎಂಬ ಅನುಮಾನಕ್ಕೆ ಈ ದೃಶ್ಯ ಸಾಕ್ಷಿಯಾಗಿದೆ. ಇನ್ನಾದರೂ ಪೊಲೀಸ್ ಇಲಾಖೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರಾ ಕಾದುನೋಡಬೇಕಾಗಿದೆ.